Index   ವಚನ - 190    Search  
 
ಗುರು ಬಲ್ಲ ತೀರ್ಥಪ್ರಸಾದದ ಕೊಳುಕೊಡೆಯ ನರರೇನು ಬಲ್ಲರಯ್ಯ? ಅರುಹು ತೀರ್ಥವು ಇಷ್ಟಲಿಂಗಕ್ಕೆ ಪ್ರಾಣಲಿಂಗನದು ಕರುಣಪ್ರಸಾದ ಪಾಲಿತ ಪಾಷಾಣ ಪ್ರತಿಷ್ಠಿತ ಅರಿಯದೆ ಕೊಟ್ಟವಂಗೆ ಅಘೋರ ನರಕ ಅರಿತು ಕೊಂಡವಂಗೆ ಕುಂಭಿನಿ ನರಕ ಅರುಹಿದ ತನ್ನ ಲೆಂಕರಿಗೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.