Index   ವಚನ - 193    Search  
 
ಕಷ್ಟನಷ್ಟರಿಗೆ ಕೊಟ್ಟಲ್ಲಿ ಏನು ಫಲ? ಕೊಂಡಲ್ಲಿ ಏನು ಫಲ? ವಿಷ್ಣುಭಕ್ತರು ಅಲ್ಲ, ಶಿವಭಕ್ತರು ಅಲ್ಲ, ಒಟ್ಟವೆ ಜಗುಲಿ ಮೇಲೆ ಒಂದಲ್ಲ ನೂರು. ಇಟ್ಟಕಲ್ಲಿಗೆ ಹರಿದಾಡುವಂಗೆ ಆಜನ್ಮ ನರಕ. ಉಟ್ಟುದು ಬೀವಿನ ಸೀರೆ, ಊರೂಟ ದೇವಿಗೆ ಹೆಟ್ಟ ಎಡಿ ಕೊಟ್ಟ. ಲೊಟ್ಟ ಗುಡಿ ಕಟ್ಟಿದ ತಟ್ಟಿಯ ಮರೆಯಲ್ಲಿ ಕಚ್ಚಿ ಆಡಿದ ತೆರನಾಯಿತ್ತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.