ಇಂತಪ್ಪ ಭಕ್ತಿ, ಬಂತಿದು ಬಹಿರಂಗ
ವಂತಿಗೆ ಕಟ್ಟಿದರು, ವಂಶದೊಳಗೆ ಹೆಣ್ಣು ಕೊಡರೆಂದು
ಅಂತ್ಯಜರು ಕೊಟ್ಟರು, ಓಗರ ದಿವರಾತ್ರಿ ಒಬ್ಬರಿಗೆ ಒಬ್ಬರು
ಸಂತತಿ ಗುರುಶಿಷ್ಯಭಾವ ಸಾವಿರಕೆ ಇಲ್ಲ, ಲಕ್ಷಕ್ಕೆ ಇಲ್ಲ,
ಹಂತಿಗೆ ತಿರುಗುವ ಎತ್ತಿನಂತೆ,
ಭತ್ತವ ತಿಂದು ಭತ್ತವ ಹೇತು ಬಿತ್ತು ಈ ಜನ್ಮಕ್ಕೆ.
ಭೂಮಿ ಬೇಸತ್ತಿತ್ತು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.