Index   ವಚನ - 199    Search  
 
ಪುರಾತರು ಮುಂತು ಪರವ ಕಾಣದೆ ಭ್ರಮಿತರಾದರು. ಮೆರವಣಿಗೆ ನಾ ಘನ ತಾ ಘನವೆಂದು ಮೇರೆದಪ್ಪಿತ್ತು. ಕರಸ್ಥಲದೊಳಗಣ ಕ್ರಿಯವೆ ಕರ್ಮವೆಂದು ಕಾರಣ. ಕಾಲಕಾಲಕ್ಕೆ ಬರಬೇಕಾಯಿತು. ಪರೀಕ್ಷಿಸಿ ಪಾದವ ಕಂಡಾತ ಕಪ್ಪಡಿಯಲ್ಲಿ ಐಕ್ಯನಾದ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.