Index   ವಚನ - 205    Search  
 
ಜಾರೆಗೆ ರೂಪು ಲಾವಣ್ಯ, ಪತಿವ್ರತೆಗೆ ಕುರೂಪು ವರ ಉತ್ತಮ ತೇಜಿಗೆ ಚಮ್ಮಟಿಗೆಯೊ(ಯೆ?) ಗೊರಜ ಅಘೋರದೊಳು ಪುಟ್ಟದರೇನಯ್ಯ, ಪವಿತ್ರ ಎನಿಸದೆ? ನೂರೊಂದು ಕುಲದೊಳು ಆರಾದರಾಗಲಿ, ಶುದ್ಧಾತ್ಮನೆ ಶಿವಭಕ್ತಿ, ಮುಗ್ದ ಮುಕ್ತ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.