Index   ವಚನ - 204    Search  
 
ಕಳ್ಳಹೊನ್ನಿಂಗೆ ದೊಡ್ಡ ಮುದ್ರೆಯಿಟ್ಟರೇನಯ್ಯ, ಒಳ್ಳಿತು ಬಣ್ಣದಲ್ಲಿ, ಕಡಮೆ ತೂಕದಲ್ಲಿ? ಒಳ್ಳೆ ಆವು, ಮೆಕ್ಕೆ ಬುಡಕ್ಕೆ ಹಾಲನೆರೆದು, ಸಕ್ಕರೆ ಕಟ್ಟೆಯ ಕಟ್ಟಲು, ಒಳವಿಷಮಂ ಬಿಟ್ಟು ಊರ್ದ್ವ ಮಧುರವಪ್ಪುದೆ? ಕಳ್ಳರ ಸುಳ್ಳರ ವೇಷವ ತಾಳಿದರೆ ಆಸ್ಕರರು ಒಡೆಯರು ಭಕ್ತರಾಗುವರೆ? ಒಳಿತು ರೂಪಿನೊಳು ಪಾಪವೆ ಲೇಪವಾಗಿಪ್ಪುದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.