ಪ್ರಾಣಲಿಂಗದ ಪ್ರಸನ್ನವ ಅಣೆಕಾರರಲ್ಲದೆ, ಅಜ್ಞಾನಿಗಳೆತ್ತಬಲ್ಲರಯ್ಯ?
ವೇಣಿಯೊಳಗಣ ಕಸ್ತೂರಿ ಅನ್ವಯವ, ವೇಷದಾರಿಗಳು ಬಲ್ಲರೆ?
ನಾಣ್ಯವು, ನಾಲ್ಕು ಯುಗದಲ್ಲಿ ಇಲ್ಲದ ನಡೆಗುಣವ ತಂದು
ವಾಣಿಜನ ಕೈಯ[ಲಿ] ಬೆಲೆಯ ಕಟ್ಟಿಸಿ[ದಂತೆ],
ಜಾಣ ಕೂಡಲಸಂಗಶೆಟ್ಟಿ ಪ್ರಾಣಲಿಂಗಸಂಬಂಧವಾದ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.