Index   ವಚನ - 210    Search  
 
ಗುಪ್ತಾರ್ಥ ಭಕ್ತಿಗೆ ಅಶನ ಎತ್ತಣದು? ನಿತ್ಯ ದುಃಖ ಮಾಡುವುದು, ಬೇಡವುದು ಸತ್ತವರ ಮುಂದೆ ಸೊಡರು ಇಟ್ಟಂತೆ. ಪುತ್ರ ಮಿತ್ರ ಕಳತ್ರಯ ಅತ್ತರೆಂದು ಅರಿವುದೆ ಶ್ರವ? ಭಕ್ತಿ ಬಾಹ್ಯರಕ್ಕೆ ಬಂದಾಗ ಭ್ರಷ್ಟ ಅಪ್ಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.