Index   ವಚನ - 215    Search  
 
ಭೋಗವ ಕಾಣದೆ ಯೋಗಬಲ್ಲಿದರೇನಯ್ಯ? ಹೋಗುವುದೆ ದುಶ್ಚಿಂತೆ, ಪೂರ್ವದ ರಾಗ ವಿರಾಗ? ರಾಗಕ್ಕೆ ವರ್ಣವಿಲ್ಲದಿರೆ ರಸಕಾವ್ಯರಚನೆ ಅಪ್ಪುದೆ? ಮೇಘಗರ್ಜನೆಯಿಲ್ಲದಿರೆ ಮೇರುಮಂಡಲ ದರಿಗಟ್ಟುವುದೆ? ಜಗಜಾಣ ಯೋಗಿ, ಭಕ್ತನಾಗಿ ಆರಕ್ಕೆ ಉಪದೇಶಿಯಾಗಿ ಬಂದ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.