Index   ವಚನ - 216    Search  
 
ಯೋಗಿ ಸಿದ್ದರಾಮ, ಜೋಗಿ ಗೋರಕ್ಷ, ಶ್ರವಣ ಆದಿಮಯ್ಯ ಸನ್ಯಾಸಿ ಶುಕದೇವ, ಪಾಶುಪತ ಹನುಮಾನ, ಕಾಳಾಮುಖಿ ನಂದೀಶ್ವರ; ಅಗಮ ಆರು ದರುಶನಕ್ಕೆ ಉಪದೇಶ ಅನಂಗವೇಷ ನಾ ಗುರುವು ತಾ ಗುರುವು ಎಂಬವರು ಓಗರದವರು. ದಾಗಿನ ಎತ್ತು ಕತ್ತೆಯಾಗಿ ಹೊತ್ತರು ರೂಪವನ್ನು. ದರುಶನಕ್ಕೆ ನಿರ್ದರುಶನ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.