Index   ವಚನ - 224    Search  
 
ಮನುಷ್ಯಜನ್ಮದಲ್ಲಿ ಹುಟ್ಟಿ ಮಾಡುವ ಕೃಷಿಯ[ದು]ವೆ ಕುಲ. ಮನವು ಹರಿವುದ ಹಲವು ಉದ್ಯೋಗದ ಮೇಲೆ, ತನ್ನ ಕುಲಕಾಯಕವ ಬಿಟ್ಟು ಹಲವು ಉದ್ಯೋಗವ ಮುಟ್ಟಿದರೆ ಅನಾಚಾರ ಬೇರೆ ಉಂಟೆ? ಅಕ್ಕುಲೆಕೆ ಹುಟ್ಟಿದನೆ? ಎನಬಾರದು ಕುಲವೆಂದು, ಎನ್ನದೆ ಹರಿಯದು ಅನೇಕರು ಅಕ್ಕುಲಜರಾದರು ಆಸೆ ಅಮಿಷ ಅಕ್ಷೇಪದಲ್ಲಿ. ಮನೋನಾಥನೊಲಿದುದೇ ಕುಲ, ಒಲಿಯದುದೆ ಅಕ್ಕುಲ. ಅನಾದಿಸಿದ್ಧನ ವಾಕ್ಯ ಅಂತಿಂತು ಎಂಬರೆ ತೆರಪಿಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.