Index   ವಚನ - 223    Search  
 
ಕುಲಜನಾಗಿ ಅಕ್ಕುಲವ ದೈವವ ಪೂಜಿಸುವರೆ? ಹೊಲೆಯ[ನ] ಮನೆ ಹೊಕ್ಕೊಂಡು ಬಂದ ದೈವಕ್ಕೆ ತಲೆಯೊನೊಡ್ಡಿ ಶರಣೆನ್ನಬಹುದೆ? ಹಲವು ಅಡಿಗೆಯ ಮೀಸಲವ ಮಾಡಿ ನೀಡಿ ಹಸ್ತವನೊಡ್ಡುವರೆ ಒಕ್ಕುದಕ್ಕೆ? ಒಲಿವ ದೈವಂತು, ತಾನೆಂತು, ತನ್ನ ಕುಲವೆಂತು? ಎಲೊ ಮಾನವ ಎತ್ತಣ ಕುಲವೋ ಫಲಪದ ಇಲ್ಲದ ಪಾಷಂಡಿ, ಅಚಲಪದವೇ ಕುಲ ದೈವ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.