ಕುಲ ಅಕ್ಕುಲವೆಂಬುದು ತನ್ನಲೆ.
ಹೊಲೆ ಮಾದಿಗೆ ಕೀಳಿಗೆ ನೂರೊಂದು ಕಳೆಯು ತನ್ನಲೆ.
ಒಲಿವುದು ಒಲ್ಲದುದು ಮನಚಿತ್ತವೃತ್ತಿಯಲ್ಲೇ.
ಫಲ ನಿಷ್ಫಲ, ಪಾಪ ಪುಣ್ಯವೆಂಬುದು ನೋಟದಲ್ಲೇ.
ಸಲ್ವುದು ಸಲ್ಲದು ಎಂಬ ನುಡಿಶ್ರುತಿಗೇಳವ ಕರ್ಣದಲ್ಲೇ.
ಕೊಲೆ ಹಿಂಸೆಯ ಮಾಡುವ ಕೋಪ ಶಾಂತಿ ಜಿಹ್ವೆಯಲ್ಲಿಯೇ.
ಉಲಿವ ಉತ್ತರ ವಾಯುವ ನಾಸಿಕದಲ್ಲಿಯೋ.
ಹಲವು ಉತ್ಪತ್ತಿ ಬಿತ್ತುಬೆಳೆ ನಿಮ್ಮಾಣೆಯಲ್ಲಿಯೇ.
ಒಲಿವರ ಪಂಚಭೂತಕರು(ರ?), ಕುಲದೈವ ಮನೆದೈವ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.