ಹತ್ತರೊಳು ದೈವ ಉಂಟೆಂದು ಭಕ್ತರು ನುಡಿದರು.
ಹತ್ತುದೈವ ತನ್ನ ಒತ್ತಿಲೆ ಇತ್ತು.
ಉತ್ತಮ ಮಧ್ಯಮ ಕನಿಷ್ಠ ಮೂರು ತೊಟ್ಟನಯ್ಯ.
ಸತ್ತಲ್ಲೆ ತಾನು, ಅತ್ತಲ್ಲೆ ತಾನು,
ಹೊತ್ತಲ್ಲೆ ತಾನು ಆಗಿಹನಯ್ಯ
ಕತ್ತಲೆ ತಾನು, ಬೆಳಕು ತಾನು,
ಸುತ್ತನೋಡಿದರೆ ತಾನೆ ತಾನಯ್ಯ
ಸತ್ತಿಪ್ಪ ತನುವು ತಾನೆ, ಹುಟ್ಟಿಪ್ಪ ತನುವು ತಾನೆ,
ಬತ್ತಲೆ ತನುವು ತಾನೆ.
ಎತ್ತಣ ದೈವ ಎತ್ತಣ ದೇಹ, ಎತ್ತಣ ದೇಶವಯ್ಯ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.