Index   ವಚನ - 236    Search  
 
ಮೂರರ ಸಾಧ್ಯದ ಮುಕ್ತಿ ಆತನಲ್ಲೆ. ಆರರ ಬೇದದ ಯುಕ್ತಿ ಆತನಲ್ಲೆ. ಶರಣ ಆತನಲ್ಲೆ, ಐಕ್ಯ ಆತನಲ್ಲೆ. ಇಹವು ಆತನಲ್ಲೆ, ಪರವು ಆತನಲ್ಲೆ. ಇಹದಲ್ಲಿ ಕೊಟ್ಟ ಮೂರು, ಪರದಲ್ಲಿ ಕೊಟ್ಟ ಮೂರು. ಕೊಟ್ಟ ಕರ್ತೃ, ಕೊಂಡ ಭೃತ್ಯ ಬಲ್ಲನಲ್ಲದೆ ಇಟ್ಟ ಒಡವೆಯ ಇನ್ನಾರೂ ಅರಿಯರು. ಮುನ್ನಾರೂ ಅರಿಯರು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.