ಗುರುಲಿಂಗಜಂಗಮ ಅಸಾಧ್ಯ;
ಸಾಧ್ಯವಾಯಿತು ಎಂಬ ಗುರುದ್ರೋಹಿಗಳೆ ಕೇಳಿರೂ:
ಗುರು ಸಾಧ್ಯವಾದ ಬಳಿಕ, ಅಂಗಶೂನ್ಯ
ಲಿಂಗ ಸಾಧ್ಯವಾದ ಬಳಿಕ, ಪ್ರಸಾದ ಶೂನ್ಯ
ಜಂಗಮ ಸಾಧ್ಯವಾದ ಬಳಿಕ, ಭವ ಶೂನ್ಯ
ತೀರ್ಥ ಸಾಧ್ಯವಾದ ಬಳಿಕ,
ನಿವಾರಣ(ನಿರ್ವಾಣ?) ಶೂನ್ಯ.
ಪ್ರಸಾದ ಸಾಧ್ಯವಾದ ಬಳಿಕ, ಕ್ಷುತ್ತು ಶೂನ್ಯ.
ಇಂತು ಅರಿಗೆ ಅನರ್ಘ್ಯ ಸಾಧ್ಯವಾದ ಬಳಿಕ,
ಬರಬಾರದು ಮರ್ತ್ಯಕ್ಕೆ ತೊಳಲಬಾರದು ಯೋನಿಗೆ.
ಇಂತು ಅತಃಪುರ ನರಜನ್ಮಕೆ ಸಾಧ್ಯವಪ್ಪುದೇನಯ್ಯ?
ಇಂತಿವು ಕಾರಣವಾಗಿ,
ಬಸವಣ್ಣ ತೊಳಲಬೇಕಾಯಿತು ಹದಿನಾಲ್ಕು ಭವ
ಅಂತು ಭವಗೇಡಿಯಾದ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.