Index   ವಚನ - 238    Search  
 
ಭವಮಾಲೆಯ ತೊಟ್ಟು, ಭಕ್ತಿಮಾಲೆಯ ಉಟ್ಟು ಬಹುದಾಗಿ ಬರಬೇಕಾಯಿತ್ತು. ಅದೆಂತೆಂದಡೆ, ಸ್ಥೂಲವ ತೊಡೆದಿದ್ದಾಗಲೆ ಉತ್ಪತ್ತಿ ನಾಸ್ತಿ; ಸೂಕ್ಷ್ಮವ ತೊಡೆದಿದ್ದಾಗಲೆ ಸ್ಥಿತಿ ನಾಸ್ತಿ; ಕಾರಣವ ತೊಡದಿದ್ದಾಗಲೆ ಲಯ ನಾಸ್ತಿ. ಲಯ ಕಾರಣ, ಸೂಕ್ಷ್ಮ ಸ್ಥಿತಿ, ಸ್ಥೂಲ ಉತ್ಪತ್ತಿ. ಅಳಿವು ಎಂಬುದೆ ಅನ್ಯಾಯ, ಉಳಿವು ಎಂಬುದೆ ನ್ಯಾಯ. ಅನ್ಯಾಯ ನ್ಯಾಯ ಒಂದೆ ಕಾಣಯ್ಯ. ಒಂದು ದ್ವಂದ್ವ, ತ್ರಿಕರಣ, ಚತುರ್ಗಣ, ಪಂಚಭೌತಿಕ, ಷಡುವರ್ಗ, ಸಪ್ತಧಾತು, ಅಷ್ಟಮದ, ನವನಾಳ, ದಶವಾಯು ಇಂತಿವು ಐವತ್ತೈದು ಏಕದೆಶೆಗೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.