Index   ವಚನ - 239    Search  
 
ಆಕಾರವಂ ಬಿಟ್ಟು ನಿರಾಕಾರ ಸಾಧ್ಯವಪ್ಪುದೆ? ಅವಸ್ಥೆ ಅವಸ್ಥೆ. ಅನ್ಯಾಯವ ಬಿಟ್ಟು ನ್ಯಾಯ ಸಾಧ್ಯವಪ್ಪುದೆ? ಅವಸ್ಥೆ ಅವಸ್ಥೆ. ಆಕಾರ ನಿರಾಕಾರ ದ್ವಂದ್ವ, ಅನ್ಯಾಯ ನ್ಯಾಯ ದ್ವಂದ್ವ ಮಾಯ ವಿಶ್ವತೋಮಯ, ವಿಶ್ವತೋಚಕ್ಷು ತ್ತಿಗುಣಾತ್ಮ ತ್ರಿಕುಲ ತ್ರಿಫಲ, ತ್ರಿಮೂಲವಾಸ ನಿವಾಸ ಆಕಾರದೊಳು ಕಂಡ, ನಿರಾಕಾರದೊಳು ಉಂಡ ನಿಃಕಲೆಯೊಳು ಕೈತೊಳವಂಗೆ, ಹಗಲು ಆಗದ ಮೊದಲೆ ಆರೋಗಣೆ ಆಯಿತ್ತು. ಕೈಯ ತೊಳೆಯದ ಮೊದಲೆ ಎಂಜಲು ಹೋಯಿತ್ತು. ಅಂತು ಗುಹೇಶ್ವರನ ನಿರ್ಗುಹೇಶ್ವರನುಂಡ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.