Index   ವಚನ - 240    Search  
 
ತನು ಗುಹೇಶ್ವರ, ಮನ ನಿರ್ಗುಹೇಶ್ವರ ತನುಮನಕೆ ಅಂತರ ಅಭ್ಯಂತರ. ಮನ ನಿರ್ಮಳ ನಿಶ್ಚಲ, ಘನ ಅನಾದಿ ತನುವು ಅಂತರ ನಿರಾದಿ ತನುವು, ನಿತ್ಯ ಅಂತರ ನಿಶ್ಯೂನ್ಯ ತನವು ನಿಗಮಾಂತರ ನಿರೋಗಿ, ಯೋಗಿ, ವಿಶ್ವಯೋಗಿ ಭೋಗಿ, ನಿರ್ಭೋಗಿ, ನಿದ್ರೆ, ನಿರ್ನಿದ್ರೆ, ಮಿರ್ವಾದಿ ನಿತ್ಯಂತರ ಗುಣ ಆತ್ಮ ನಿರ್ಮನ ವಿಸರ್ಜಿತ ಸರ್ಜಿತ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.