Index   ವಚನ - 242    Search  
 
ಜಲ ಹುಟ್ಟಿ ಪ್ರಳಯವೇಳು ಭವ, ಜಲಪ್ರಮಾಣ ಅಪ್ರಮಾಣ ಜನನ ಮರಣ. ಜಲಸೂತ್ರ ನೆಲಸೂತ್ರ ಜಲಮಲ ಮಂದಿರ ಕಾಯಪುರ, ಕಲಿ ಜಲಸಂಹಾರ ಕಾಲಜ್ಞಾನ ಅಜ್ಞಾನ ಸಪ್ತಭವ, ಜ್ಞಾನ ಸಪ್ತಭವ ಇಂತೀ ಭವಮೂಲ ಭಕ್ತಸ್ಥಲಭರಿತಂಗೆ ಅಲ್ಲದೆ, ಸಲ್ಲದು ಜಡಂಗೆ, ಜನ್ಮಕೆ ಪ್ರಳಯ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.