Index   ವಚನ - 243    Search  
 
ಗುರುಭಕ್ತಿ ಗುಹೇಶ್ವರ, ಗುಪ್ತಭಕ್ತಿ ನಿರ್ಗುಹೇಶ್ವರ. ಗುರು ಲಘುವಿನ ದ್ವಂದ್ವ, ಪರವಂದನೆ ಗೂಢಾರ್ಥ, ಗುರತ್ವ ಗುಪ್ತಭಕ್ತಿ ಭಕ್ತಿ ಆಕಾರ ನಿರಾಕಾರ, ಗುರುತ್ವ ಅಂತಸ್ಥ ಗುಪ್ತ ಅಂತಸ್ಥ, ಆಧ್ಯಾತ್ಮಜ್ಞಾನ ಗುರುಭಕ್ತಿ ಇದು ಕಾರಣದಿಂದಲಿ ನಿರ್ಗುಹೇಶ್ವರ ನಿತ್ಯನಾದ. ಇದು ಕಾರಣ ಅಂಗ ಪ್ರಾಣ ದ್ವಂದ್ವವಾಯಿತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.