Index   ವಚನ - 249    Search  
 
ಪ್ರಾಯಬಂದ ತನುವಿಂಗೆ ಸಾಹಿತ್ಯವೆಂತಪ್ಪುದಯ್ಯ? ಎಳದು ಕಾಯ ಕೊಯ್ದು ಬೀಜಕ್ಕೆ ಬಿಟ್ಟರೆ ಫಲವಪ್ಪುದೆ? ದೇಹ ದುರ್ಗುಣಮಂ ಬಿಡಿದರೆ ದರ್ಮುಖಿ ಶಿವಭಕ್ತನೆ? ಆಯತವಿಲ್ಲ ಸಾಹಿತ್ಯವಿಲ್ಲ ಸಲ್ಲ. ತಾ ಮಾಡುವ ಕಾಯಕದೊಳಿ ಧರ್ಮಾಧರ್ಮ ವಿಚಾರಿಪಡೆ ಸಾಹಿತ್ಯವಿನ್ನು ಬೇರೆ ಇಲ್ಲಾ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.