Index   ವಚನ - 248    Search  
 
ಮನದ ಮಾರ್ಗವ ಬಿಡದೆ ನೆನಹುಕೋಟಿಯೊಳು ಇದ್ದರೇನು ಅಯ್ಯ, ಕನಸಿನೊಳು ದ್ರವ್ಯದ ಕಂಡಾಕ್ಷಣ ವೆಚ್ಚಕ್ಕೆ ಕೊಡಲುಬಹುದೆ? ಮನದಂತೆ ಮಂಗಳ, ನೆನಹಿನಂತೆ ನಿಶ್ಚಯ ತನುತ್ರಯ ವಿಷತ್ರಯ, ಮುನಿವ ಅನಲದಂತೆ ಅಡರುವುದು ಅಜಾತ ಸಂಗಯ್ಯನ ಕೃಪೆ. ದಿನಕರಣೆ ಅಳವಡದೆ ಹೋಗಿ ದಿಕ್ಕುಗಾಣದಾದಿರೆ ಅಯ್ಯ! ಶುನಕ ಮಣಕದ ಸಂಗಡ ತಾನು ಬೆದರಿದಂತೆ ಅಯಿತ್ತು ಎನ್ನ ಭವ. ಅನಿತ್ಯ ನಿತ್ಯವೆಂತಪ್ಪುದಯ್ಯ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.