Index   ವಚನ - 253    Search  
 
[ಕುರುಹು] ಅರುಹಿನ ನೋಟಕ್ಕೆ ಮರವೆ ಎರಡು ಉಂಟು. ಅರುಹು ಕಾಂಬರೆ ಕುರುಹು ಸಿಕ್ಕದು; ಕುರುಹ ಕಾಂಬರೆ ಅರುಹು ಸಿಕ್ಕದು, ವರಕೃಪೆಯ ಪಡೆದುಬಂದಲ್ಲದೆ. ಅರುಹು ಕುರುಹ ಸಾಧ್ಯವಪ್ಪುದೇನಯ್ಯ? ಸೀರೆಯೊಳು ಹದಿನಾಲ್ಕು ಮೊಳೆ ನಿರ[ಗೆ]ಯನಡಗಿಸೆ ಸೆರಗು ಮೊಳದೊಳು ಮುಸುಕು ಇದ್ದಂತೆ, ಅರುಹು ಕುರುಹು ಸಮನ್ವಿತ. ಪೊರೆಹಾವ ಕಳೆಯ ಕಳೆಯಲು ತೆರೆ ಕಡೆಯಿಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.