Index   ವಚನ - 254    Search  
 
ನಾ ಗುರುವೆಂಬ ವಾಕ್ಯಕೆ, ಆ ಪಾದ ಎಲ್ಲಿತ್ತು? ಗುರುಪಾದವೆಂತು ಪಾದವೆಂತು, ತೀರ್ಥವೆಂತು ಪ್ರಸಾದವೆಂತು? ನಾ ಗುರು ತಾ ಗುರು ನಿಜವಾದ ಗುರು, ನಿರ್ಗುರು ನಿಜಗುರು ತಾ ಗುರುವಾದ ಬಳಿಕ ನಿರಾದಿಯಲ್ಲಿ ಇಪ್ಪುದೇ ಸ್ಥಲ. ತಾಗಿ ಬಾಗುವುದು; ತಾಗದೆ ಬಾಗುವುದೆ? ಭಕ್ತಿಯುಕ್ತಿ [ನಡೆಗಾಗಿ] ಗುರುವೆಂಬ ವಾಜಿಯ ನಡಿಗೆ ಈ ಗುರುವಿನ ಶಿಕ್ಷೆ ತಪ್ಪದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.