Index   ವಚನ - 255    Search  
 
ದೀಕ್ಷೆಯ ಕೊಟ್ಟು ದಿಕ್ಕುಗೆಟ್ಟುಹೋದರಯ್ಯ. ಸಾಕ್ಷಿಸಾಹಿತ್ಯವ ಮರೆದು, ಒಬ್ಬರಿಗೆ ಒಬ್ಬರು ಕೊಟ್ಟು ನಡೆವರು? ಶಿಕ್ಷೆಯ ಆಚಾರ್ಯರಿಗೆ ಅತೀತ ನಡೆ, ವಾಕ್ಯಸಾಹಿತ್ಯವೆಂಬುದೇ ಗುರುಪ್ರಸಾದ, ಅಕ್ಷೇಪ ಅಚಾರ್ಯರಿಗೆ ತೋರಿದುದೆ ಅಗಮ, ದೀಕ್ಷೆ ವಿಚಾರವಿಲ್ಲದೆ ಕೆಟ್ಟಿತು. ಪಾದದ ಕಟ್ಟು ಮೋಕ್ಷಕೆ, ಪಾಲಿಪಾತ್ರೆಯೊಳು ಭಿಕ್ಷವ ಉಂಡು ಆ ಕ್ಷಣ ಮರಹುಗವಿದು ಮಾರ್ಗತಪ್ಪಿ, ಶಿಕ್ಷೆಗೆ ಒಳಗಾಗಬೇಕಾಯಿತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.