Index   ವಚನ - 264    Search  
 
ಬಳಲಿದ ಪಾದವ ಸತ್ಕರಿಸುವುದು ಹಸ್ತ. ಬಳಲಿ ಬಾಯಾರಿದಡೆ ಊಡುವುದು ಹಸ್ತ. ಬಳಲಿದ ಹಸ್ತವ ಹೊತ್ತು ನಡೆವುದು ಪಾದ. ತಾಳಿದ ಪಾದವ ತೊಳೆವುದು ಹಸ್ತ. ಹೇಳಿದ ನಾಲಿಗೆ, ಕೇಳಿದ ಕಿವಿ, ನೋಡಿದ ಕಣ್ಣು ಗೂಢಾರ್ಥ ಮೂರನು ಆಳಿದ ಚೈತನ್ಯ ಒಬ್ಬ. ಒಬ್ಬರಿಗೆ ಒಂದೊಂದನು ಸತ್ಕರಿಸಿ[ಎಂದು], ಹೇಳದೆ ಹೋಪದು ಏನು ಕಾರಣ? ಅವಗುಣದಿಂದಲಿ ಆಳಾದವರು ಅರಸಾಪರು ಅರಿತರೆ. ಏಳಾದರೂ ಮೇಲೆ ಎರಡಾದರೂ ಕೆಳಗೆ ಇಂತು ಹದಿಮೂರಕ್ಕೆ ಹೇಳದೆ ಹೋದಾತ ಸಂಗನ ಶರಣ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.