Index   ವಚನ - 272    Search  
 
ನಂಟು, ಅತೀವ ಇಷ್ಟತೆಯಂದ ಕುಂಟಿಸುವುದಯ್ಯ ಭಕ್ತಿ ಕುಲವು ಸೇರಲು ಗಂಟು ಅದಕ್ಕೆ. ಉಂಬಡೆ ಉಡುವಡೆ, ಕೊಂಬಡೆ ಕೊಡವಡೆ ಅಂಟುರಾಳ ಜಿಗಿಯಂತೆ ಆಶಾಬದ್ಧವು. ನಂಟತಿಭಕ್ತಿ ನಾಯಕನರಕ, ವೆಂಟಿಯ ಭಕ್ತಿ ಸಮಯಕುತರ್ಕ. ಗಂಟಲಗಾಣ ಸರ್ವಸಮಸ್ತಕೆ ಶಿವಭಕ್ತ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.