Index   ವಚನ - 273    Search  
 
ಪೃಥ್ವಿ[ಯ] ಆಸ್ತಿ ಶಿಲೆ, ಪಿತಮಾತೆ ಬಿನ್ನಣೆ ಎತ್ತಣ ಶೀವಲಿಂಗವು ವ್ಯವಹಾರಸಂಬಂಧಿ[ಗೆ] ಭತ್ತದ ಬೋನ[ವ] ಮಾಡುವ ಅಗ್ಗವಣಿ, ಗಿಡದ ಪತ್ರೆ ಪೃಥ್ವಿ ಮೇಗಣ ಹುಟ್ಟು, ಪೃಥ್ವಿ ಮೇಗಣ ಹೊಂದು ಈ ಪೃಥ್ವಿ ಮೇಗಣ ಶಿಲೆಗೆ ಅರ್ಪಿಸಿ [ವರವ] ಪಡೆದೆನೆಂಬ ವ್ಯರ್ಥರ ಮಾತು ಕೇಳಬಾರದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.