Index   ವಚನ - 274    Search  
 
ಕಲಿಪ್ರವೇಶದಿಂದ ಕಲ್ಲು ಆಯಿತು ಮೂರ್ತಿ. ಪ್ರಾಣಲಿಂಗವಿದು ಪರತಂತ್ರವೆನಿಸಿತು. ಕುಲಾಚಾರ ಹೆಚ್ಚಿತ್ತು, ಕುಬುದ್ದಿಯ ಬಿತ್ತು ಕಲಹ ಪುಟ್ಟಿತ್ತು ಕರ್ಮ ಘನವಾಯಿತ್ತು. ಧರ್ಮ ಅಡಗಿತ್ತು, ನಿರ್ಮಳ ಅರತಿತ್ತು ಹಲುಬುತಿದೆ ಕಲ್ಪಿತ ಅಯುಷ್ಯ ಅದರಿಂದ ಸುಲಭದ ಭಕ್ತಿ, ಸೂಕ್ಷ್ಮದ ಲಿಂಗ, ಸಲಹು ಸಮರ್ಪಿತ ಸಕಲ ನಿನ್ನೂಳು ಶರಣ. ಯಾಕೆ ಕಲ್ಪಿಸಿದೆಯಯ್ಯ ರೂಪು ಆಕಾರ? ಕಲಿ ನಾಲ್ಕುಯುಗ ಕಡೆಸಂಬಂಧವು, ಕಾಯಸಂಬಂಧವನರಿವುದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.