Index   ವಚನ - 283    Search  
 
ಕುಲಗೆಡುವರು ಸಲೆ ಕಾಮಕ್ಕೆ, ಕುಲಗೆಡೆವರು ಮಲಪಾಶಕ್ಕೆ ಕುಲಗೆಡವರು ಸವಿರುಚಿಸ್ವಾದಕ್ಕೆ ನೆಲೆಗೆಟ್ಟು ನಯದಪ್ಪಿ ಹೊಲೆಗಲಿಸಿ ಹೋರುತಿಹರು ಶ್ರೇಷ್ಠಕ್ಕೆ ಸಲೆ ಶಿವನ ಭಕ್ತಿಗಾಗಿ ಕುಲಗೇಡಿ ಆದವನ ಹೊರಗೆಂಬರು ಸಲ್ಲದು ಸಲ್ಲದು ಈ ಮಾಟದ ಲೋಕ ಭಕ್ತಂಗೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.