ಎಂತಪ್ಪುದಯ್ಯ ಭಕ್ತಿ, ಸಂತೆಯ ರೂಪು ಸಕಲ ಜನ್ಮಕ್ಕೆ?
ಪಂಕ್ತಿ ಪಾದಾರ್ಚನೆಗಾಗಿ ಪಾಶ ಉದಯಿಸಿತ್ತು.
ಮಂತ್ರ ಪ್ರಣಮಕ್ಕೆ ಮಾರ್ಗ ತಪ್ಪಿತ್ತು.
ಅಂತರಾತ್ಮವ ಮರೆತು ಭುತಾತ್ಮವಾಯಿತ್ತು.
ಇಂತರ್ಗೆ [ಅ] ಹಿಂಸೆ ವಿವೇಕ ಅವಿವೇಕವಾಯಿತ್ತು.
ಚಿಂತಾಯಕ ಗುರುಗುಹೇಶ್ವರ ಚಿನ್ಮಯಸ್ವರೂಪು,
ಅಂತರ್ಗೆ ಒಪ್ಪುವನೆ?
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Entappudayya bhakti, santeya rūpu sakala janmakke?
Paṅkti pādārcanegāgi pāśa udayisittu.
Mantra praṇamakke mārga tappittu.
Antarātmava maretu bhutātmavāyittu.
Intarge [a] hinse vivēka avivēkavāyittu.
Cintāyaka guruguhēśvara cinmayasvarūpu,
antarge oppuvane?
Ele nam'ma kūḍala cennasaṅgamadēvayya.