ಭುವನದ ಪೊಂದಿದ ಕಾಮರನೆಲ್ಲ[ವು] ಪರಿಮಳವಪ್ಪುದೆ?
ಭಾವಜ್ಞರ ಪೊಂದಲು ಭವಿಗಳು ಭಕ್ತರೆ ಎಲ್ಲ?
ಸೇವಯು ಗುರು ಸೋಹಂಭಾವವು ಭವಿ ಹಿಂಗುವರೆ?
ಈವ ಗುರು ಗುಹೇಶ್ವರನು ಇಂತಪ್ಪ ಪದಗಳು.
ತಾವಾರಯ್ಯ, ತಮ್ಮಿಂದ ಅಹುದೆ ಸೇವೆ?
ಶಿವಶರಣ ಕಿಂಕುರ್ವಾಣನೆಂದು ಕಾಂಬುದು ಕಾರಣ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Bhuvanada pondida kāmaranella[vu] parimaḷavappude?
Bhāvajñara pondalu bhavigaḷu bhaktare ella?
Sēvayu guru sōhambhāvavu bhavi hiṅguvare?
Īva guru guhēśvaranu intappa padagaḷu.
Tāvārayya, tam'minda ahude sēve?
Śivaśaraṇa kiṅkurvāṇanendu kāmbudu kāraṇa kāṇā
ele nam'ma kūḍala cennasaṅgamadēvayya.