Index   ವಚನ - 290    Search  
 
ಗುರುಲಿಂಗಜಂಗಮ ಗುಪ್ತಾರ್ಥವಲ್ಲದೆ, ನರರಿಂಗೆ ಅಹುದೆ? ಸೋರೆಯ ಕಾಯಿ ಮುಂತು ವಿಷ, ಪರಪುರುಷಾರ್ಥಕೆ ಬಹುದೆ? ಈಶ್ವರ ಗುರುಲಿಂಗಜಂಗಮ. ಪರ ತನ್ನೊಳು, ತಾನು ಪರರೊಳು, ಅರಿವರೆ. ತಾನು ಅಸಂಖ್ಯಾತ ಅಸ್ಕರವಳಿದರೆ. ಉಳುಮೆ ಜ್ಞಾನದೊಳು ಇಹುದು. ತಿಳಿವುದು ತನ್ನೂಳು ತಾನು, ಗುರುಲಿಂಗಜಂಗಮ. ಪರಕೆ ಕರುಹು ಮರವೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.