Index   ವಚನ - 291    Search  
 
ಕಲ್ಪನೆ ತನ್ನ ಕಾರ್ಪಣ್ಯಪಡಿಸದೇನಯ್ಯ? ಅಲ್ಪರ ಸಂಗದೋಷದಿಂದ ಅನಾಹುತವು ತಪ್ಪದು. ತನ್ನ ತಾನೆ ತಿಳಿವುದೆ, ತಮಂಧ ಶಕ್ತಿಯ. ಹೆಪ್ಪಿಡು ತನುತ್ರಯಕ್ಕೆ. ಹೆಚ್ಚಳವರಿಯದೆ ನಿಶ್ಚಯ ಹಿಡಿದರೆ, ಇಹಪರ ಕಾಯ ಪ್ರಣಮದಿಂದೆ ಸತ್ಪುರುಷನಪ್ಪನಯ್ಯ. ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.