Index   ವಚನ - 294    Search  
 
ಅರ್ಚಿಸುವು[ದು],ಸಕಲಗುರುವಿಗೆ ಅಚ್ಚಪ್ರಸಾದವನೈದುವುದು. ಅಷ್ಟಾವಧಾನದಲ್ಲಿ ಪಕ್ಷಪಾತಕವಳಿವುದು. ದುಶ್ಚಿಂತವ ದೂರಮಾಡುವುದು. ದುಃಸ್ವಪ್ನವ ದೂರ ಮಾಡುವುದು. ನಿಶ್ಚಯ ನಿಜನಂಬುಗೆ ಅಚ್ಚುಗವಿದು. ಭಕ್ತಿಬಾವ ಬಾಹ್ಯರವಲ್ಲವು. ಮೆಚ್ಚು ಗುರುಗುಹೇಶ್ವರ[ನ] ಅಂತರ್ಗವಿಸು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.