Index   ವಚನ - 293    Search  
 
ಸಂಸಾರ ಯೋಗ ಸಂಸಾರ ಉದ್ಯೋಗ, ಸಾಕ್ಷಿಯೊಳು ಸಂದು ಸಂಶಯವಳಿವುದು ಎಂತಪ್ಪುದಯ್ಯ? ವಂಶಿಕನಪ್ಪರೆ ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ? ಹಂಸೆಗೆ ಹಾಲು ನೀರು ಎರೆದರೆ ಗತಿಗುಂದುವುದೆ? ವಂಶವು ಪಕ್ಷಿಯ ಜನ್ಮವಂತಿಪ್ಪುದು, ಭಕ್ತಿಯ ಬರಡೆ? ವಂಶಕ್ಕೆ ಸದ್ಭಕ್ತ ಮುಕ್ತ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.