Index   ವಚನ - 309    Search  
 
ನಿಶೂನ್ಯ ಲಿಂಗದ ಬೆಡಗ ಅಶನಾದಿಗಳೆತ್ತಬಲ್ಲರು? ಪಶುಜನ್ಯ ಮುಂತಾಗಿ ಗೋಮಯ ಪವಿತ್ರವೆನಿಸತ್ತು. ಅಸುರಾಂತ ಅಮೇಧ್ಯವ ಭುಂಜಿಸುತ್ತಿದೆ. ನಿಷೇದವೆಂದು ಕಂಡ ಮನುಷ್ಯಜನ್ಮ ಮಾರ್ಗ ತಪ್ಪಿತು. ಬಸವಪ್ರಿಯ ಕೂಡಲಚನ್ನಸಂಗ ವಿಶೇಷ ನಿಮ್ಮ ಶರಣರಲ್ಲಿ ಲಿಂಗವನಿವಾಸ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.