Index   ವಚನ - 311    Search  
 
ದಳನೇಮದ ಅರಿವು, ಮರವೆಯ ಅಳಕದೊಳಗುಂಟು ಹೊರಗುಂಟು. ಸುಳಿಗಾಳಿ ಸುತ್ತಿ ಬಂಬರೆ ಸೂತ್ರಪಟವಾಡುವುದೆ? ಒಳಗೆ ನಿರ್ಮಳವಾದರೆ ವಂತಿನ ಕುರುಹಿಂಗೆ ವರವಪ್ಪುದೆ? ತೊಳಲಿ ಬಳಲಿ ಪತಂಗ ಹಾಳಾದಂತೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.