Index   ವಚನ - 312    Search  
 
ಕ್ರಮವಿಲ್ಲದ ಕ್ರಿಯವ, ಕಟ್ಟಿ ಬಿಡುವ ಸಂಬಂಧಿಗಳಿಗೆ ನಮಃಶಿವಾಯ ಮಂತ್ರ ಯಾತಕ್ಕೋ? ಸಮಾಧಾನದಿ ಲಿಂಗಸತ್ಕರಣೆ ಉಂಟು. ತಮ್ಮಿಚ್ಚೆಯ ಗುರು ನೆಚ್ಚಿನ ಶಿಷ್ಯ, ಕ್ರಮವಾವುದು ಮಿಥ್ಯವಾವುದು? ಕುಮಂತ್ರವ ಮಂತ್ರ ಕುರುಹೆ ಆಕಾರ, ಕುಲವೆ ಛಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.