Index   ವಚನ - 326    Search  
 
ಗುರುವುಂಟು, ಲಿಂಗವುಂಟು, ಜಂಗಮವುಂಟು. ತೀರ್ಥವುಂಟು, ಪ್ರಸಾದವುಂಟು; ಮರೆವು ಎಲ್ಲುಂಟು ಅರುಹು ಎಲ್ಲುಂಟು, ಅಲ್ಲುಂಟು. ಗುರುವುಂಟು, ನಿರುತ ನಿರಂಗಿ ನಿಜಲಿಂಗಾಂಗಿಸಂಗಿಯಲ್ಲಿ. ಜಂಗಮವುಂಟು, ಜಾಗ್ರ ಸುಷಪ್ತಿ ತುರೀಯದಲ್ಲಿ. ತೀರ್ಥವುಂಟು, ತ್ರಿಮುಖಾಯವಂ ಮುರಹರಗರ್ಪಿಸಬಲ್ಲರೆ. ಪ್ರಸಾದವುಂಟು, ಅಪರಿಮಿತ ಉಪಮಾತೀತರಲ್ಲಿ. ಗುರುಗುಹೇಶ್ವರ ಗುರುತ್ವ ಗುಪ್ತ, ಲಘುತ್ವ ಗುಪ್ತ ಗೂಢಾರ್ಥ ಗುಹ್ಯ ಶ್ರುತಿಯೊಳಡಕ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.