ವ್ರತಿಗಳು ಷೇಧ ನಿಷೇಧವಂ ಮಾಡುವ(ರು)
ವ್ರತಸ್ಥರಂಗೆ ಅಂತಸ್ಥಲವೆ ಅಯ್ಯ?
ಹಿತವ್ಯಾವುದು ಆಹಿತವ್ಯಾವುದು ತಮ್ಮ ಅಂಗಕ್ಕೆ?
ಮೃತವಾದ ಶ್ವಾನದುರ್ಗಂಧವ
[ಮೂಸಿದುವುದಿಲ್ಲವೆ] ನಾಸಿಕದಲ್ಲಿ?
ಕ್ಷುಪ್ತಿಗೆ ಕೀಡಿ ಕ್ರಿಮಿ ಕ್ಲೇಶವಭುಂಜಿಸುವುದಲ್ಲವೆ ಜಿಹ್ವೆಯಲ್ಲಿ?
ಅತಿಕಾಮ ಲಜ್ಜೆ ಮಜ್ಜೆ ಮಂಸಕ್ಕೆ
ಹೊಂದಿಸುವದಿಲ್ಲವೆ ಜನ್ಮದಲ್ಲಿ.
ವ್ರತವೆಂತೆಂತು, ಷೇಧವೆಂತೆಂತು, ನಿಷೇಧವೆಂತೆಂತು
ಮತಿಹೀನರಿಗೆ ಮಂತ್ರ ಉಂಟೆ ಅಯ್ಯ?
ಸತ್ಯವ ಸಾಹಿತ್ಯ, ಸಜ್ಜನವೆ ಮಜ್ಜನ,
ಸನ್ನಿಧವೆ ಸೌಖ್ಯ, ಸನ್ಮತವೆ ಮತ
ಆಧ್ಯಾತ್ಮವೆ ಶ್ರುತ, ಆಗಮವೆ ನಿಗಮ
ಮಿಕ್ಕವೆಲ್ಲ ವೇಶಿಯ ಪಥ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Vratigaḷu ṣēdha niṣēdhavaṁ māḍuva(ru)
vratastharaṅge antasthalave ayya?
Hitavyāvudu āhitavyāvudu tam'ma aṅgakke?
Mr̥tavāda śvānadurgandhava
[mūsiduvudillave] nāsikadalli?
Kṣuptige kīḍi krimi klēśavabhun̄jisuvudallave jihveyalli?
Atikāma lajje majje mansakke
hondisuvadillave janmadalli.
Vratavententu, ṣēdhavententu, niṣēdhavententu
matihīnarige mantra uṇṭe ayya?
Satyava sāhitya, sajjanave majjana,
sannidhave saukhya, sanmatave mata
ādhyātmave śruta, āgamave nigama
mikkavella vēśiya patha kāṇā
ele nam'ma kūḍala cennasaṅgamadēvayya.