Index   ವಚನ - 328    Search  
 
ಲಿಂಗ ಉಂಟೊ ಇಲ್ಲವೊ ಎಂಬ ಭಂಗಿತನ ಶಬ್ದವ ಕೇಳಬಹುದೆ ಕರ್ಣದಲ್ಲಿ? ಲಿಂಗ ಉಂಟಾದವರಾರು, ಲಿಂಗವಿಲ್ಲದವರಾರು? ಲಿಂಗವ ತಾ ಕಲ್ಪಿಸಿದನೊ? ತನ್ನ ಲಿಂಗ ಕಲ್ಪಿಸಿತೊ? ಲಿಂಗ ಕರ್ತ. ತಾ ಭೃತ್ಯ; ಅನಂಗಿಗ್ಯಾತಕ್ಕೊ? ಲಿಂಗದ ಹಂಗು? ಲಿಂಗಸಾಹಿತ್ಯವಾದಬಳಿಕ ಅಂಗ(ಲಿಂಗ?) ಬೀಳಲ್ಯಾತಕ್ಕೊ? ಕಂಗುರುಡ ಕನ್ನಡಿಯ ನೋಡಿ ಮೂಗ ಕೊಯ್ದುಕೊಂಡಾಯಿತು. ತಿಂಗಳದ ಚೋರಟೆಯ ಯುಗದ ಸುದ್ದಿಯ ಕೇಳಲ್ಯಾತಕ್ಕೊ? ಲಿಂಗದ ಗರ್ಭದೊಳು ಅನಿಲವಡಗಿದಂತೆ, ಈ ಉತ್ಪತ್ಯ ಲಿಂಗವನು ಇನ್ನು ವಿಂಗಡಿಸಿವರೆ ಅಳವಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.