ಅಂದು ಲಕ್ಷದಾಮೇಲೆ ತೊಂಬತ್ತಾರು ಸಾವಿರ
ಮುಂದಗಾಣದೆ ಭ್ರಷ್ಟರಾದರು.
ಹೊಂದಿದ ಪ್ರಭುವಂ ಕಾಣದೆ ಸುರೆಮಾಂಸ ಪೆಂಡಿಗಳಾದರು.
ಹಿಂದಿನ ಪೂರ್ವವನಳಿದು ಪುನರ್ಜಾತರಂ ಮಾಡಿ.
ಅಂದಿನ ಮಾಂಸಪಿಂಡವಳಿದು ಮಂತ್ರಪಿಂಡವಂ ಮಾಡಿ.
ಬಂದ ಭರ ಚನ್ನದಂಡೇಶ್ವರನ ಗಾಳಿಯ ಧೂಳಿಯಲ್ಲಿ
ಮುಂದ್ಯಾರು ನಿಂತಾರು?
ಬೆಂದದರೊಳು ಸಸಿ ಉಳಿದಂತೆ ಷಡುಸ್ಥಳದ ಸಾರಾಯಿ
ಕುಂದಬಾರದು ಕುಂದಬಾರದು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.