Index   ವಚನ - 334    Search  
 
ಮಲವಿಭೂತಿ ಮಾಯಾಪಾಶ ಲಿಂಗಕ್ಕೆ ಮರಣ ಅಂತ್ಯ ಜಂಗಮ ಸ್ಥೂಲದಲಿ ತೋರಿದವು ಭಕ್ತಿಸೂಚನೆ ಇವರೊಳು. ಅಲ್ಲ ಅಹುದು ಎಂಬರೆ ಇವರೊಳು ಫಲವೇನು ಇಪ್ಪುವು? ಕಲಿಯೊಳಗೆ ನಡೆವ ಕರ್ಮಕ್ಕೆ, ವರ್ಮವ ಕಟ್ಟುವ ನಿಲುಕದ ಲಿಂಗವ ಹಿಡಿವರೆ, ಸಲೆ ಭಸಿತ ಹಿಡಿದು ನಡೆವರೆ ಅಸಾಧ್ಯವ ಪಡೆವ[ರು]. ಅಲ್ಲಮನ ಜಂಗಮ ಎಂದರೆ ಆದಿ ಭಕ್ತಂಗೆ ಅಸಾಧ್ಯ [ಸಾಧ್ಯ] ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.