Index   ವಚನ - 333    Search  
 
ಸಕಲಾರ್ಪಿತ ಪ್ರಾಣಲಿಂಗ ಅಕಲ್ಪಿತ ಸಂಗನೆಂಬ ಶ್ರುತಿ ಸುಖ ದುಃಖ ಶೂನ್ಯವೆ ಸ್ಥಲ, ಮತ್ತೆ ಪ್ರತಿಯೆ? ಚಕೋರನಂತೆ ಹಾರೈಸಿ, ಹತ್ತಿರಲಿದ್ದ ತಾರಕಬ್ರಹ್ಮವ ಸುಖ[ಪ್ರ]ಸಂಗಿಗಳು ಕಾಂಬರಲ್ಲದೆ, ವಿಕಳತರಿಗುಂಟೆ? ಮುಖ ಸಹಸ್ರಮೂರ್ತಿ ಪ್ರಕಾಶ ಅಕಲ್ಪಿತಲಿಂಗ[ವು] ಬಕನಂತೆ ಆಣವಮಲ, ಮಾಯಾಮಲ, ಕಾರ್ಮಿಕಮಲವ ಸುಖಿಸುವಂತೆ ಪ್ರಕಾಶ ದೂರ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.