Index   ವಚನ - 344    Search  
 
ನೆಂಟನು ಬಂಟನು ಶಿಷ್ಯನು ಒಂಟಿಗರಲ್ಲ ಮೂವರೊಂದೆ ಕಾರಣವು. ಗಂಟಿನ ಆಶೆಯ ನೆಂಟನು, ಬಂಟನು, ಕುಂಟಣಿ ಶಿಷ್ಯನು ಕಂಟಕವನು ಕಳೆವರೆ ಅಳವೆ ಕರ್ಮವು ಇವರೊಳು. ಬಂಟನು ಒಡೆಯನು ಆಳ್ವರೆ, ನೆಂಟನು ನಂಟನು ತಾಳ್ವರೆ ಉಂಟುಮಾಡುವರೆ ಗುರುವನು ಶಿಷ್ಯನು. ಕುಂಟಣಿ ಮಗಳಿಗೆ ತಾಯಿ ತಾನು. ಕಂಟಕವ ಮೀರವರೆ ಕೈಲಾಸಕ್ಕೆ ಯೋಗ್ಯರು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.