Index   ವಚನ - 347    Search  
 
ರಘುನಾಯಕನೆನಿಸಿ ಒಡೆಯನ ಬಗೆಯನ್ನು ಕಾಣದೆ ಯುಗಯುಗ ಬರುತಲಿ ಬಂದರು ಭವದ ಬಳ್ಳಿಯೊಳು. ಜಗದೊಳು ಇಂತಪ್ಪವರ ನಗುವರು ನಾಯಕರಲ್ಲ, ರತ್ನಕ್ಕೆ ಸಲ್ಲ. ಮಿಗಿಲು ದಂಡನಾಯಕರು ಕಂಡರು ಒಡೆಯನ. ಸುಗುಣನು ಗುರುವಿನ ಶಿಷ್ಯನು ಒಡೆಯಗೆ ಬಂಟನು. ಸಗದ ಸಂಗಯ್ಯನು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.