Index   ವಚನ - 350    Search  
 
ವಚನ ಅನುಭಾವದಿಂದಲಿ ಸುಶೀಲನಪ್ಪ ವೀರಶೂರ. ಕುಚಿಲತನ ಕುಮಂತ್ರ ಕುಹಕವ ಬಿಡುವುದು. ವಚನವು ಶಿವಭಕ್ತಂಗೆ ಒಲುಮೆ, ಭಕ್ತಂಗೆ ಬಲುಮೆ. ವಚನವು ನೀಚರಿಗೆ ಪ್ರಳಯ. ಅಚಲರಿಗೆ ಇವೇ ಪದ ಕಾಣ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.