Index   ವಚನ - 354    Search  
 
ನುಡಿ[ಗೆ] ಬರನಪ್ಪುದೆ ಜಗದೊಳು? ನಡೆದವರೆಲ್ಲ ನುಡಿನುಡಿಗಿಂದಲಿ ಅಧಿಕರು. ನುಡಿವರು ಒಡಲಾಸೆಗೆ, ನುಡಿವರು ಕೆಡುನುಡಿ. ಒಡೆತನದಿಂ ನುಡಿವುದು ನಡೆನುಡಿ ನುಡಿ ಅನುಜ್ಞೆಯಲ್ಲಿ ನುಡಿವುದೆ ಗುರುನುಡಿ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.